ಗುರುವಾರ, ಏಪ್ರಿಲ್ 24, 2014

"ಅವರು ದುಡ್ಡು ಮಾಡಿದ್ದರು ಆದರೆ ಕಳಂಕಿತರಾಗಿರಲಿಲ್ಲ"


ನಿನ್ನೆ ಮೃತರಾದ ಎ.ಕೃಷ್ಣಪ್ಪ ನವರ ಕುರಿತು ಪತ್ರಕರ್ತ ಲಕ್ಷಣ್ ಹೂಗಾರ್ ಸುವರ್ಣ ಟಿವಿಯಲ್ಲಿ ಚರ್ಚೆ ನಡೆಸುತಿದ್ದಾಗ ಒಂದು ಮಾತು ಹೇಳಿದರು "ಅವರು ದುಡ್ಡು ಮಾಡಿದ್ದರು ಆದರೆ ಕಳಂಕಿತರಾಗಿರಲಿಲ್ಲ", ಅವರು ಕಳಂಕಿತರು ಇವರು ಕಳಂಕಿತರಲ್ಲ ಅನ್ನೋ ಸರ್ಟಿಫಿಕೆಟ್ ಕೊಡೋದಿಕ್ಕೆ ಇವರ್ಯಾರು ಸ್ವಾಮಿ. ಇತ್ತೀಚಿಗೆ ಕೆಲ ಪತ್ರಕರ್ತ ರಿಂದ ನ್ಯಾಯಾದೀಶರಂತೆ ತೀರ್ಪು ಕೊಡುವ ಒಂದು ಪರಿಪಾಟ ಶುರುವಾಗಿದೆ. 

ಒಬ್ಬ ಕಾರ್ಮಿಕ ಮುಖಂಡ ಕೋಟ್ಯಾಂತರ ಆಸ್ತಿ ಮಾಡೋದಿಕ್ಕೆ ಹೇಗೆ ಸಾಧ್ಯ ಅನ್ನೋ ಒಂದು ಸಾಮಾನ್ಯ ಜ್ಞಾನ ಇವರಿಗೆ ಹೊಳೀಲಿಲ್ವ. ಕಳೆದ ವಿಧಾನ ಸಭೆ ಚುನಾವಣೆ(೨೦೧೩) ವೇಳೇ ಆದಾಯ ತೆರಿಗೆ ಅಧಿಕಾರಿ ಗಳು ದಾಳಿ ನಡೆಸಿ ೨.೨೦ ಕೋಟಿ ಹಣ, ೧.೮೮ ಕೋಟಿ ಬೆಲೆಬಾಳುವ ಒಡವೆ ಗಳು ಹಲವಾರು ಆಸ್ತಿ ದಾಖಲೆ ಪ್ರಮಾಣ ಪತ್ರ ಗಳನ್ನು ವಶ ಪಡಿಸಿಕೊಂಡಿದ್ದರು.

೨೦೧೪ ಲೋಕಸಭಾ ಚುನಾವಣೆ ನಾಮಪತ್ರ ಸಲ್ಲಿಕೆ ಯಲ್ಲಿ ೭೦ಕೋಟಿ ಮೌಲ್ಯದ ಆಸ್ತಿ ಯನ್ನು ಘೋಷಿಸಿಕೊಂಡಿದ್ದರು. ಇದು ತೋರಿಕೆಗೆ ಮಾತ್ರ, ಇದು ಸರಿಯೋ ಅಥವ ತಪ್ಪು ಮಾಹಿತಿಯೋ ಅಂತ ಯಾರೂ ಹುಡುಕೋದಿಕ್ಕೆ ಹೋಗಿಲ್ಲ. 
ಕೆ.ಆರ್.ಪುರ, ಹೊಸಕೋಟೆ ಸುತ್ತಮುತ್ತ ಹಲವಾರು ಎಕರೆ ಜಮೀನು ಗಳು , ಹಲವಾರು ಶಿಕ್ಷಣ ಸಂಸ್ಥೆಗಳು ಇನ್ನು ಮುಂತಾದ ಆಸ್ತಿಯನ್ನು ಮಾಡಿರುವ ಇವರು ದುಡಿದಿದ್ದು ನ್ಯಾಯಯುತವಾದ ದಾರಿಯಿಂದ ಅಂಥ ಸಾಕ್ಷಿ ಸಮೇತ ತೋರಿಸಲಿಕ್ಕೆ ಲಕ್ಷ್ಮಣ್ ಹೂಗಾರ್ ರವರಿಗೆ ಸಾಧ್ಯವಾಗುತ್ತ ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ