ಗುರುವಾರ, ಏಪ್ರಿಲ್ 24, 2014

"ಅವರು ದುಡ್ಡು ಮಾಡಿದ್ದರು ಆದರೆ ಕಳಂಕಿತರಾಗಿರಲಿಲ್ಲ"


ನಿನ್ನೆ ಮೃತರಾದ ಎ.ಕೃಷ್ಣಪ್ಪ ನವರ ಕುರಿತು ಪತ್ರಕರ್ತ ಲಕ್ಷಣ್ ಹೂಗಾರ್ ಸುವರ್ಣ ಟಿವಿಯಲ್ಲಿ ಚರ್ಚೆ ನಡೆಸುತಿದ್ದಾಗ ಒಂದು ಮಾತು ಹೇಳಿದರು "ಅವರು ದುಡ್ಡು ಮಾಡಿದ್ದರು ಆದರೆ ಕಳಂಕಿತರಾಗಿರಲಿಲ್ಲ", ಅವರು ಕಳಂಕಿತರು ಇವರು ಕಳಂಕಿತರಲ್ಲ ಅನ್ನೋ ಸರ್ಟಿಫಿಕೆಟ್ ಕೊಡೋದಿಕ್ಕೆ ಇವರ್ಯಾರು ಸ್ವಾಮಿ. ಇತ್ತೀಚಿಗೆ ಕೆಲ ಪತ್ರಕರ್ತ ರಿಂದ ನ್ಯಾಯಾದೀಶರಂತೆ ತೀರ್ಪು ಕೊಡುವ ಒಂದು ಪರಿಪಾಟ ಶುರುವಾಗಿದೆ. 

ಒಬ್ಬ ಕಾರ್ಮಿಕ ಮುಖಂಡ ಕೋಟ್ಯಾಂತರ ಆಸ್ತಿ ಮಾಡೋದಿಕ್ಕೆ ಹೇಗೆ ಸಾಧ್ಯ ಅನ್ನೋ ಒಂದು ಸಾಮಾನ್ಯ ಜ್ಞಾನ ಇವರಿಗೆ ಹೊಳೀಲಿಲ್ವ. ಕಳೆದ ವಿಧಾನ ಸಭೆ ಚುನಾವಣೆ(೨೦೧೩) ವೇಳೇ ಆದಾಯ ತೆರಿಗೆ ಅಧಿಕಾರಿ ಗಳು ದಾಳಿ ನಡೆಸಿ ೨.೨೦ ಕೋಟಿ ಹಣ, ೧.೮೮ ಕೋಟಿ ಬೆಲೆಬಾಳುವ ಒಡವೆ ಗಳು ಹಲವಾರು ಆಸ್ತಿ ದಾಖಲೆ ಪ್ರಮಾಣ ಪತ್ರ ಗಳನ್ನು ವಶ ಪಡಿಸಿಕೊಂಡಿದ್ದರು.

೨೦೧೪ ಲೋಕಸಭಾ ಚುನಾವಣೆ ನಾಮಪತ್ರ ಸಲ್ಲಿಕೆ ಯಲ್ಲಿ ೭೦ಕೋಟಿ ಮೌಲ್ಯದ ಆಸ್ತಿ ಯನ್ನು ಘೋಷಿಸಿಕೊಂಡಿದ್ದರು. ಇದು ತೋರಿಕೆಗೆ ಮಾತ್ರ, ಇದು ಸರಿಯೋ ಅಥವ ತಪ್ಪು ಮಾಹಿತಿಯೋ ಅಂತ ಯಾರೂ ಹುಡುಕೋದಿಕ್ಕೆ ಹೋಗಿಲ್ಲ. 
ಕೆ.ಆರ್.ಪುರ, ಹೊಸಕೋಟೆ ಸುತ್ತಮುತ್ತ ಹಲವಾರು ಎಕರೆ ಜಮೀನು ಗಳು , ಹಲವಾರು ಶಿಕ್ಷಣ ಸಂಸ್ಥೆಗಳು ಇನ್ನು ಮುಂತಾದ ಆಸ್ತಿಯನ್ನು ಮಾಡಿರುವ ಇವರು ದುಡಿದಿದ್ದು ನ್ಯಾಯಯುತವಾದ ದಾರಿಯಿಂದ ಅಂಥ ಸಾಕ್ಷಿ ಸಮೇತ ತೋರಿಸಲಿಕ್ಕೆ ಲಕ್ಷ್ಮಣ್ ಹೂಗಾರ್ ರವರಿಗೆ ಸಾಧ್ಯವಾಗುತ್ತ ?

ಹುಸಿ ಜಾತ್ಯಾತೀತವಾದಿಗಳಿಗೆ ಕೆಲವು ಪ್ರಶ್ನೆಗಳು.


ಪ್ರಶ್ನೆಗಳು ಚೆನ್ನಾಗಿವೆ, ಆದರೆ ಇಲ್ಲೊಂದು ಸಿಕ್ಕು ಇದೆ. ಯಾರಾದರು ಉತ್ತರ ಕೊಟ್ಟರೆ, ಅವರು ಹುಸಿ ಜಾತ್ಯಾತೀತವಾದಿಗಳು ಅಂತ ಗುರ್ತಿಸಿಕೊಳ್ಳಬೇಕಾಗುತ್ತೆ ಯಾಕೆಂದರೆ, ಈ ಪ್ರಶ್ನೆಗಳು ಹುಸು ಜಾತ್ಯಾತೀತ ವಾದಿಗಳಿಗೆ ಮಾತ್ರ.


ಬುಧವಾರ, ಏಪ್ರಿಲ್ 23, 2014

ನಿರಂತರ

ಒಂದು ಹೊಸ ಬ್ಲಾಗ್ ಶುರು ಮಾಡ್ಬೇಕು ಅಂತ ತುಂಬಾ ದಿನದಿಂದ ಯೋಚಿಸ್ತಾಯಿದ್ದೆ. ದಿನ ನಿತ್ಯದ ಆಗು ಹೋಗುಗಳ ಬಗ್ಗೆ, ರಾಜಕೀಯ, ಸಿನಿಮಾ, ಮಾಧ್ಯಮ, ಸಾಹಿತ್ಯ ಹೀಗೆ ಹಲವಾರು ಕ್ಷೇತ್ರಗಳಲ್ಲಿ ನನಗನಿಸಿದ್ದನ್ನು ದಾಖಲಿಸುತ್ತ ಹೋಗಬೇಕು ಅಂತ ಅನಿಸುತ್ತಾಯಿತ್ತು. ಬ್ಲಾಗ್ ಗೆ ಹೆಸರಿಡಬೇಕಲ್ಲ, ಏನಪ್ಪ ಹೆಸರಿಡೋದು ಅಂತ ಎರಡು ಮೂರುದಿನ ತಲೆ ಕೆರೆದುಕೊಂಡೆ. ಕೂದಲು ಮಾತ್ರ ಬಿತ್ತು, ಹೆಸರು ಮಾತ್ರ ಹೊಳೀಲಿಲ್ಲ. 

ಒಂದು ದಿನ ಒಂದು ಹೆಸರು ಹೊಳೆಯಿತು ನೋಡೀ "ನಿರಂತರ" ಅಂತ. ಅದನ್ನ ಯಾಕೆ ಹಿಡಿದುಕೊಂಡೆ ಅಂದರೆ, 
ಬದುಕು ನಿರಂತರ
ಕಾಯಕ ನಿರಂತರ
ಹೋರಾಟ ನಿರಂತರ
ರಾಜಕೀಯ ನಿರಂತರ
ಸುದ್ದಿ ಪ್ರಸಾರ ನಿರಂತರ
ಚಿತ್ರ ನಿರ್ಮಾಣ ನಿರಂತರ
ಉಳಿವಿಗಾಗಿ ಹೋರಾಟ ನಿರಂತರ
ಉಂಡು ಮಲಗೋದು.......... ನಿರಂತರ

ಅಬ್ಬಬ್ಬ ಎಲ್ಲನೂ ನಿರಂತರ ನೋಡೀ, ಸರಿ ಇದೇ ಇರಲಿ ಅಂತ ಶುರು ಮಾಡಿದೆ. 

ಅಂದ ಹಾಗೆ ಈ ಬರೆಯುವ ಕಾಯಕ ಮತ್ತು ನಿಮ್ಮೆಲ್ಲರ ಹಾರೈಕೆ ನಿರಂತರ ವಾಗಿರಲಿ ಎಂದು ಆಶಿಸುತ್ತ, 

ಇಂತಿ

ನಿಮ್ಮ ಪ್ರೀತಿಯ,

ಪಿ.ಎಸ್.ರಂಗನಾಥ